ವಿವಿಧ ರೀತಿಯಲ್ಲಿ ಹಣಕ್ಕೆ ನಿಡಿದ ನಾನಾ ಹೆಸರುಗಳು ('Names for money in various ways')
ಓ ಕಾಸೆ ಅದೆಷ್ಟು ಹೆಸರು ಬದಲಿಸಿಬಿಟ್ಟೆ.
ಗುಡಿಯ ಒಳಗೆ ನಿನ್ನ ಹೆಸರು ಕಾಣಿಕೆ. ಹರಕೆ.
ಗುಡಿಯ ಹೊರಗೆ ನಿನ್ನ ಹೆಸರು ಬಿಕ್ಷೆ .
ನೌಕರನಿಗೆ ಕೊಟ್ಟರೆ ನಿನ್ನ ಹೆಸರು ಸಂಬಳ,
ಕಾರ್ಮಿಕರಿಗೆ ಕೊಟ್ಟರೆ ಕೂಲಿ ,
ಬಲಿಷ್ಠರಿಗೆ ಕೊಟ್ಟರೆ ನಿನ್ನ ಹೆಸರು ದೇಣಿಗೆ
ಕನಿಷ್ಠ ರಿಗೆ ಕೊಟ್ಟರೆ ದಾನ.
ಸರ್ಕಾರಕ್ಕೆ ಕಟ್ಟಿದರೆ ತೆರಿಗೆ
ನಿವೃತ್ತಿಯಲಿ ಪಿಂಚಣಿ
ವೃದ್ಧರಿಗೆ ವೇತನ
ಕಟಕಟೆಯಲ್ಲಿ ಕಟ್ಟಿದರೆ ದಂಡ
ಕಾರ್ಯ ನಿಮ್ಮಿತ್ಯ. ಕಳ್ಳ ದಾರಿಯಲಿ
ನಿನ್ನ ಹೆಸರು ಲಂಚ.
ಸಾವಿನ ಮನೆಯಲ್ಲಿ ಸಂಭ್ರಮಿಸುವ
ನಿನ್ನ ಹೆಸರು ಪರಿಹಾರ.
ಹೋಟೆಲ್ ನಲ್ಲಿ ಬಿಲ್ .
ಮೋಟಾರ್ನಲಿ ಬಾಡಿಗೆ.
ಕರುಣೆ ಮರೆತ ಕೈಗಳಲ್ಲಿ ನಿನ್ನ ಹೆಸರು ಸುಪಾರಿ.
ಒಟ್ಟಿನಲ್ಲಿ ನೀನು ನಿಜವಿಲ್ಲದ ಸಂಚಾರಿ
ಬಡವರಿಗೆ ಬಗ್ಗದ ವ್ಯಾಪಾರಿ.
ಹಿರಿದಾರಿಯಲಿ ಹಿಗ್ಗುವೆ.
ಕಿರಿದಾರಿಯಲಿ ಕುಗ್ಗುವೆ
ಪ್ರಚಾರಕ್ಕೆ ಅರಳುವೆ,
ವಿಚಾರಕ್ಕೆ ಬಾಡುವೆ.
ತಪ್ಪು ನಿನ್ನದಲ್ಲ ಹಣವೇ, ,,
ನೀ ಆಡಿಸುವವರ, ಕೈ ಬೊಂಬೆ ಯಾಗಿರುವೆ. .
ಸಾವಿರಾರು ಹೆಸರಿರುವ ನಿನಗೆ
ನಿಷ್ಠೆ ಯಾವುದು.? ಪ್ರತಿಷ್ಠೆ ಯಾವುದು? ಎಂದು
ಅರಿಯದ ಅಮಾಯಕರಿಗೆ
ನೀನು ಗಗನ ಕುಸುಮ
ಬಡಿದುಂಡವನೇ ದೊಡ್ಡಪ್ಪ
ದುಡಿದುಂಡವನೇ ಚಿಕ್ಕಪ್ಪ.
ನಿನ್ನ ಅವತಾರ ಅರಿಯದವರು ಅಯ್ಯೋ ಪಾಪ .
................................................................................................................................................................
English translation :-
Oh, I changed that name.
Inside the hut is your name. Spread.
Outside the hut is your name Bixe.
If you give the employee your name,
Wages paid to workers
Donate your name to the strong
Donate at least.
Tax if tied to government
Retirement pension
Wages for the elderly
Penalty if tied up in pallet
The function is yours. Let the thief go
Your name is bribe.
Reveling in the house of death
Your name is the solution.
Bill at the hotel.
Motorized rental.
In the forgotten hands of mercy is your name Supari.
All in all, you're an unlucky traveler
A merchant who cannot afford to be poor.
Enlargement.
Shrinking narrowly
Bloom for propaganda,
Think about it.
It's not your money,
You are a hand puppet. .
Thousands of you
What is loyalty? What is prestige? That is
For the ignorant ignorant
You are astronaut
Uncle is the one who knocked
Dad is the hardworking uncle.
Woe to you who do not know your incarnation.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ